Wednesday, September 7, 2011
Friday, December 26, 2008
ಹಳೆ ಮಧ್ಯದ ಅಮಲು..
ಇಂದು ನಾಳೆಗಳ ನಡುವೆ
ಮನಸು ಮರವಂತೆ
ಜಾನಕಿಯ ಮಾತುಗಳುಪ್ರತಿಧ್ವನಿಸುತ್ತಿವೆ,
ಹಳೆ-ಹೊಸ ವರ್ಷಗಳಸಂಗಮ ಕಾಲದಲ್ಲಿ..
ಈ ಹಳೆ-ಹೊಸತುಗಳನಡುವೆ
ಇರುವ ವ್ಯತ್ಯಾಸವಾದರೂ ಏನು..?
ಆಶಯಗಳೋ
ಹೊಸ ಬಾಟಲಿಯೊಳಗಿನಹಳೆ ಮಧ್ಯದ ಅಮಲು..
ಜೊತೆಗಿನ ಕೋಮುದಂಗೆಮುಂಭಯೋತ್ಪಾದನೆ..
ಹೀಗೆ ಹಲವಾರು..
ಬಯಸದೆ ಸಾಗೋಣ..
ಬಂದಿದ್ದನ್ನು ಅನುಭವಿಸೋಣ..
ಏನೋ ಆಸೆ, ಆದರೂ..
ನೆನಪುಗಳ ಭಗ್ನ ಗೋಪುರ,
ಮೇಲೆಕಹಿ ನೋವುಗಳ ಗಾಳಿ..
ಹೂಂಕರಿಸಿದ ಬಾಂಬುಗಳು,
ಛಿದ್ರಗೊಂಡ ದೇಹಗಳು..
ನಾಚಿಕೆಯಿಲ್ಲದ ಕ್ಯಾಮರಾ ಕಣ್ಣುಗಳು.
ಹೋದವರು ಬಂದವರು,
ಕೊಟ್ಟ ಹೇಳಿಕೆಗಳು ಹಲವಾರು.
ಎಗ್ಗೆಯಿಲ್ಲದ ನಾಲಿಗೆಗಳು..
ಸ್ವಾರ್ಥ ಬೇಳೆಯ ರಾಜಕೀಯ,
ರಕ್ತದೋಕುಳಿಯ ಮೇಲೆ ಬೆಂದುಎದ್ದಿದ್ದು ಕರಿಮೋಡ..
ವಷರ್ಾಂತ್ಯದಲ್ಲಿ ಸಂಭವಿಸಿದ ದುರಂತ,
ನೆರಳಿನಲ್ಲಿ ಸರಿವ ವರ್ಷಕ್ಕೆಕಣ್ಣೀರ ಹಿನ್ನುಡಿ..
ಹಾಗಾದರೆ...
ಹೊಸವರ್ಷಕ್ಕೆ ಮುನ್ನುಡಿ..?
ಯುದ್ಧ ಭಯ..? ಹೊತ್ತಿ ಉರಿಯುವ ಅಜ್ಜ..?
ಆಗಮಿಸುವ ಚುನಾವಣೆ..? ಪೊಳ್ಳು ರಾಜಕೀಯ..?
ಕೋಮು-ದಳ್ಳುರಿ..? ಅಥವಾ...!
ಹೊಸವರ್ಷದಲ್ಲಿ ನಿರೀಕ್ಷಿಸಬಹುದೆಏನನ್ನಾದರೂ ಹೊಸತು..?
ಕಾಲಜ್ಞಾನಿಯ ಒಳಮರ್ಮವ ಅರಿವವರಾರು..
ನವ ಮುಂಜಾನೆ ಹೊತ್ತು ತರಬಹುದೇ,
ಇಬ್ಬನಿ ಚಳಿಯ ನಡುವೆ ಹೊಸ ಆಕಾಂಕ್ಷೆ..?
ಏನೋ ಆಸೆ, ಆದರೂ ಗಾದೆಮಾತು
'ಅತಿಯಾಸೆ ಗತಿಗೇಡು'
ಜೊತೆಗೆ ದಾಸಮಾತು
'ಬಂದದ್ದೆಲ್ಲ ಬರಲಿ...'
ಮುಗಿಲ ಮಾತಿಗೆ ತೊದಲ ನುಡಿ
ತೊಟ್ಟಿಲು..
ತೊಟ್ಟಿಲು ತೂಗುವ ತಾಯಿ ಜೋಲಿಯಲ್ಲಿ ಪವಡಿಸಿರುವ ತನ್ನ ಮಗುವಿನ ಭವಿಷ್ಯದ ಕುರಿತು ಮನದಲ್ಲೇ ಅಕಾಶದೆತ್ತರ ಆಸೆಯ ಗೋಪುರ ಕಟ್ಟುತ್ತಾಳೆ. ತಾಯಿ ಮಾತ್ರ ಅಲ್ಲ. ಶುದ್ಧ ಮನಸ್ಸಿನ ಮುಗ್ಧ ಜೀವಿ ಯಾರೇ ಇರಲಿ, ಅಂತವರು ಕೂಡ ಹೀಗೇನೇ ಯೋಚಿಸ್ತಾ ಇರ್ತಾರೆ. ಅದೇ 'ಮುಗಿಲ ಮಾತಿಗೆ ಮನದ ಮೋಡಿ'.ಎಲ್ಲರೂ ಒಂದು ದೃಷ್ಟ್ಟಿಕೋನದಲ್ಲಿ ನೋಡಿದರೆ ಅಂತಹ ಮನದವರು ತಮ್ಮದೇ ಆದ ಭಾವನೆಯಿಂದ ನೋಡುತ್ತಾರೆ. ಆ ಭಾವನೆಯ ಆಗರವೇ ಈ 'ಜೋಲಿ'.
ಈ ಜೋಲಿಯೊಳಗಿನ ಮನದ ಕೂಸು ಸ್ವಾತಂತ್ರ್ಯದೊಂದಿಗೆ ಪ್ರೇಮ ಸಿಂಚನದ ಅಭಿಲಾಷೆ ಹೊಂದಿರೋದು... ಪ್ರತಿಯೊಬ್ಬರೂ
ಜೋಲಿಯಲ್ಲಿನ ಬದುಕು ಅನುಭವಿಸಿದವರೇ. ಕೇವಲ ತಮ್ಮ ಎಳವೆಯಲ್ಲಿ ಮಾತ್ರವಲ್ಲ, ಒಂದಿಲ್ಲೊಂದು ಕ್ಷಣದಲ್ಲಿ ಮನಪಟಲದಲ್ಲಿ
ಸ್ವಾತಂತ್ರ್ಯದ ಗರಿಬಿಚ್ಚಿ ಭಾವನೆಯ ಹಂಚಿಕೊಳ್ಳಲು ಸಂಗಾತಿಯ ಹುಡುಕಾಟದಲ್ಲಿ ದೊರೆತ ಜೋಡಿಹಕ್ಕಿಯನ್ನ ಹೀಗೇನೇ
ಕೂಸಾಗಿಸಿ ಅಥವಾ ತಾನೆ ಕೂಸಾಗಿ, ಆ ಜೋಡಿಯನ್ನೇ ತಾಯಾಗಿಸಿ ಮನದ ಆದ್ರ್ರತೆಯನ್ನು ಮನಬಿಚ್ಚಿ ಹಂಚಿಕೊಳ್ಳುತ್ತಾ...
ಬದುಕಿನ ಜಂಜಾಟದ ನಡುವೆಯೇ ತಮ್ಮ ನೋವನ್ನು ಮರೆಯಲು ಪ್ರಯತ್ನಿಸುವವರು ಕೂಡ... "
ನೀ ಹೀಗೇನೇ ಹೇಳ್ತಾ ಇದ್ರೆ ನಾನು ಕೂಡ ಜೋಲಿಯೊಳಗಿನ ಕೂಸಾಗಿ ಬಿಟ್ಟಿದ್ದೆ ಕಣೋ. ನೀನು ಜೋಲಿ ತೂಗುವ ತಾಯಾಗಿ
ನಮ್ಮ ಭವಿಷ್ಯದ ಕುರಿತು ಹೇಳ್ತಾ ಇದ್ರೆ ನಿನ್ನ ತೊಡೆ ಮೇಲೆ ತಲೆ ಆನಿಸಿ ನೀಲ ಆಕಾಶ ನೋಡುತ್ತಾ ಬಿದಿಗೆಯ ಚಂದ್ರಮಗೆ, ನಿಂಗೆ
ತಿಳಿಯದ ಹಾಗೇನೇ ಕಣ್ಣಂಚಿನಲ್ಲಿ ಲೈನ್ ಹೊಡೀತಾ ಆವಾಗ ನಾಚಿ ನಕ್ಕ ನಕ್ಷತ್ರಗಳನ್ನು ಲೆಕ್ಕ ಹಾಕ್ತಾ... ಹ್ಹಾ! ಎಂಥಾ ಖುಷಿ
ಅಲ್ವಾ. ಹೌದು ಕಣೋ, ನಿನ್ನ ಮಾತುಗಳನ್ನ ಮನದಲ್ಲಿಯೇ ಅಥರ್ೈಸ್ತಾ, ಕೆಂಪಾದ ಮುಖವನ್ನ ಹಾಗೇನೇ ಮೇಲೆತ್ತಿ ಆ
ಚಂದಿರನ, ಅದೂ ಆಕಾಶ ತುಂಬಿರೋ ಕೋಟಿನಕ್ಷತ್ರಗಳ ಎದುರಲ್ಲೇ ನನ್ನ ಚಂದಿರನಾದ ನಿನ್ನನ್ನೇ ನೋಡ್ತಾ ಇದ್ರೆ... ಥೂ ಬಿಡೋ. ನಾ ಹೇಳಲ್ಲ. ನಂಗೆ ನಾಚ್ಗೆ ಆಗುತ್ತೆ ಕಣೋ...!
ನೀನು ಮೊನ್ನೆ ಹೇಳಿದ ಒಂಟಿಕಾಲಿನ ಕಾಗೆ ಕಥೆಯನ್ನು ರೂಮ್ ಮೇಟ್ 'ಇಂದು'ಗೆ ಹೇಳೋಕೆ ಹೋಗಿ ಅವಳಿಂದ ಬಂದ
ತಮಾಷೆಯ ಮಾತಿಗೆ ತತ್ತರಿಸಿ ಹೋದೆ ಕಣೋ. ಮತ್ತೆ ನಂಗೆ ತಿಳೀತು, ನೀ ಹೇಳಿದ ಕಥೆ ಒಂದು. ಅವಳಿಗೆ ನಾ ಹೇಳಿದ್ದು
ಇನ್ನೊಂದು!! ಆ ಕಥೆನ ಇನ್ನೊಮ್ಮೆ ಹೇಳೋ ಪ್ಲೀಸ್. ಇವತ್ತು ಸರಿಯಾಗಿ ಹೇಳಿ ಮುಂದೆಂದೂ 'ಇಂದು' ನಮಗೆ ತಮಾಷೆ
ಮಾಡಬಾರ್ದು. ಹಾಗೆ ಮಾಡ್ತೇನೆ ಕಣೋ. ಆದ್ರೂ ಇಂದು ಹೇಳ್ತಾ ಇದ್ಲು, ಸುಖಾಸುಮ್ಮನೆ ಫ್ಲಟರ್್ ಮಾಡೋರ್ಗಿಂತ
ಅನುಭವದ ಮೂಟೆ ತುಂಬಾ ನೋವು ತುಂಬಿರೋ ನೀನು, ನಿನ್ನ ಮಾತು ತುಂಬಾನೇ ಅರ್ಥವತ್ತಾಗಿರುತ್ತೆ ಅಂತ. ಅಷ್ಟಿಲ್ದೆ
ಹೋಗಿದ್ರೆ ನಾ ನಿನ್ ಜೊತೆ ಹೀಗೆ ಇರ್ತಿದ್ನಾ, ಅಲ್ವಾ?!

ಸರಿ ಕಣೋ. ನಾ ಹೀಗೇನೇ ಆಕಾಶ ನೋಡ್ತಾನೇ, ಕಣ್ಣು ಬಿಟ್ಟು ನಿನ್ನ ತೊಡೆ ಮೇಲೇನೇ ಮಲಗಿರ್ತೀನಿ. ನನ್ನ ತಲೆ ನೇವರಿಸ್ತಾ ನೀ ಕಥೆ ಹೇಳು... ದಿನಾ ಹೋದಲ್ಲಿ ಬಂದಲ್ಲಿ ನಿನ್ನನ್ನು ಕಾಡುವ ಕಾಗೆ ಅಲ್ವಾ ಅದು? ಅದೇನೋ ಅಂತಿದ್ದಿ, ಬೆಳಗ್ಗಿನ ತಿಂಡೀಲಿ ಚೂರುಪಾಲನ್ನು ಅದ್ಕೆ ಹಾಕದಿದ್ರೆ ದಿನವಿಡೀ ಏನಾದ್ರೂ ಸಮಸ್ಯೆ ಅಲ್ವಾ? ಸಾರಿ ಕಣೋ. ಬೈಬೇಡ. ನಾ ಏನೂ ಮಾತಾಡಲ್ಲ,
ಛುಪ್ ಚಾಪ್... ನೀನೇ ಹೇಳು. ನಾನು ಕೇಳ್ತೀನಿ...

~ನಿನ್ನೋಲವಿನ ಜೋಲಿ ಕೂಸು
Wednesday, June 20, 2007
Subscribe to:
Posts (Atom)